ಮುಚ್ಚುವ ಸ್ಥಿತಿ ತಲುಪಿದ ಇಂಜಿನೀಯರಿಂಗ್ ಕೋರ್ಸ್‍ಗಳು

ಬೆಂಗಳೂರು: ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಕೋರ್ಸ್‍ಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ದಾಖಲಾತಿಯೂ ಇಳಿ ಮುಖವಾದದ್ದರಿಂದ ಈ ಕೋರ್ಸ್‍ಗಳು ಬಹುತೇಕ ಮುಚ್ಚುವ ಸ್ಥಿತಿಗೆ ಬಂದಿವೆ. ಪ್ರಸಕ್ತ ಸಾಲಿನ ಕಾಲೇಜು ನವೀಕರಣಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು ಸ್ಥಳೀಯ ವಿಚಾರ ಸಮಿತಿ (ಎಲ್‍ಐಸಿ)ಯನ್ನು ಕಳುಹಿಸಿದಾಗ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಕೋರ್ಸ್‍ಗಳನ್ನು ಮುಚ್ಚಲು ಅನುಮತಿ ಕಲ್ಪಿಸುವಂತೆ ಕಾಲೇಜು ಆಡಳಿತ ಮಂಡಳಿ ಗಳು ವಿನಂತಿಸಿಕೊಳ್ಳುತ್ತಿವೆ ಎಂದು ಎಲ್‍ಐಸಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಅನೇಕ ಕಾಲೇಜುಗಳ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ಶೇ. 30ರಷ್ಟು ದಾಖಲಾತಿ ಆಗದೇ ಇರುವುದರಿಂದ ಕಾಲೇಜುಗಳೇ ಕೋರ್ಸ್ ಮುಚ್ಚಲು ಪ್ರಸ್ತಾವನೆ ಕಳುಹಿಸುತ್ತಿವೆ ಎಂದು ವಿಟಿಯು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಬಹುತೇಕ ಮುಚ್ಚುವ ಸ್ಥಿತಿಗೆ ಬಂದಿವೆ. ಪ್ರಸಕ್ತ ಸಾಲಿನ ಕಾಲೇಜು ನವೀಕರಣಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು ಸ್ಥಳೀಯ ವಿಚಾರ ಸಮಿತಿ (ಎಲ್‍ಐಸಿ)ಯನ್ನು ಕಳುಹಿಸಿದಾಗ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇಲ್ಲದಿರುವುದು ಗಮನಕ್ಕೆ ಬಂದಿದೆ.

ಅಲ್ಲದೆ ಕೋರ್ಸ್‍ಗಳನ್ನು ಮುಚ್ಚಲು ಅನುಮತಿ ಕಲ್ಪಿಸುವಂತೆ ಕಾಲೇಜು ಆಡಳಿತ ಮಂಡಳಿ ಗಳು ವಿನಂತಿಸಿಕೊಳ್ಳುತ್ತಿವೆ ಎಂದು ಎಲ್‍ಐಸಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ಅನೇಕ ಕಾಲೇಜುಗಳ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ಶೇ. 30ರಷ್ಟು ದಾಖಲಾತಿ ಆಗದೇ ಇರುವುದರಿಂದ ಕಾಲೇಜುಗಳೇ ಕೋರ್ಸ್ ಮುಚ್ಚಲು ಪ್ರಸ್ತಾವನೆ ಕಳುಹಿಸುತ್ತಿವೆ ಎಂದು ವಿಟಿಯು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

NEWS DESK

TIMES OF BENGALURU