ಸಮಾನಾಂತರ ರನ್‍ವೇ ಕಾರ್ಯಾಚರಣೆ ಆರಂಭ

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉತ್ತರ ರನ್ ವೇ ಗುರುವಾರ ಕಾರ್ಯಾಚರಣೆ ಆರಂಭಿಸಿತು. ಆ ಮೂಲಕ ಸಮಾನಾಂತರ ರನ್‍ವೇಗಳನ್ನು ಹೊಂದಿರುವ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದಿಂದ(ಡಿಜಿಸಿಎ) ಒಪ್ಪಿಗೆ ಪಡೆದುಕೊಳ್ಳುವುದರೊಂದಿಗೆ ಈ ರನ್ ವೇಯನ್ನು ನವೀಕರಿಸಿ, ಮೇಲ್ದರ್ಜೆಗೆ ಏರಿಸಲಾಗಿದೆ. ದಕ್ಷಿಣ ರನ್‍ವೇ 2019ರ ಡಿಸೆಂಬರ್ 6ರಿಂದ ಕಾರ್ಯಾಚರಣೆ ಆರಂಭಿಸಿದೆ. ಉತ್ತರ ರನ್‍ವೇಯನ್ನು ನವೀಕರಣಗೊಳಿಸುವ ಉದ್ದೇಶದಿಂದ 2020ರ ಜೂನ್‍ನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈಗ ಎರಡೂ ಸಮಾನಾಂತರ ರನ್‍ವೇಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ವಿಸ್ತರಣೆಯ ಪರಿಣಾಮ, ಮುಂದೆ ಗೋಚರ ಸಾಧ್ಯತೆ ಕಡಿಮೆ ಇದ್ದರೂ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೂ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಹೇಳಿದೆ.

NEWS DESK

TIMES OF BENGALURU