ಬಹುಭಾಷಾ ನಟ ಪ್ರಕಾಶ್ ರಾಜ್ ಇಂದು ತಮ್ಮ 56ನೇ ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ. ಇವರು ಚಿತ್ರರಂಗದಲ್ಲಿ ನಡೆದು ಬಂದ ಹಾದಿಯನ್ನು ನೋಡುವುದಾದರೆ ಆರಂಭದಲ್ಲಿ ಬಿಸಿಲು ಕುದುರೆ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.
ನಂತ್ರ 1994 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ತಮಿಳಿನ ಡುಯೆಟ್ ಎಂಬ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ಕನ್ನಡ ಸೇರಿದಂತೆ ಸುಮಾರು 7 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್ 5 ಬಾರಿ ನ್ಯಾಷನಲ್ ಫಿಲ್ಮ್ ಅವಾಡ್ರ್ಸ್ ಅನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಪುಷ್ಪ, ಕೆಜಿಎಫ್ 2, ವಕೀಲ್ ಸಾಬ್, ಯುವರತ್ನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಪ್ರಕಾಶ್ ರಾಜ್ 1965 ಮಾರ್ಚ್ 26ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
NEWS DESK
TIMES OF BRNGALURU