ಮೆಟ್ರೋ ನಿಲ್ದಾಣಕ್ಕೆ ಕೆಂಗಲ್ ಹನುಮಂತಯ್ಯನವರ ಹೆಸ್ರು

ಬೆಂಗಳೂರು : ನಮ್ಮ ಮೆಟ್ರೋ ಮೆಜೆಸ್ಟಿಕ್ ನಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಇಂದಿನಿಂದ ಆರಂಭವಾಗಿದೆ. ವಿಧಾನಸೌಧದ ಹೆಮ್ಮೆಯ ಶಿಲ್ಪಿ ಕೆಂಗಲ್ ಹನುಮಂತಯ್ಯ ಅವರ ಹೆಸರನ್ನು ಅವರ ಪ್ರೇರಣಾ ಶಕ್ತಿ ಸ್ಥಳ ಕೆಂಗೇರಿಯ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಆಡಳಿತ ಸುಧಾರಣಾ ಸಲಹಾ ವೇದಿಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬೆಂಗಳೂರು ರೈಲ್ವೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದೆ.

ಬೆಂಗಳೂರು ವಿಶ್ವವಿದ್ಯಾಲಯದ (ಜ್ಞಾನಭಾರತಿ) ಮೆಟ್ರೋ ನಿಲ್ದಾಣಕ್ಕೆ ಡಾ.ಎಚ್.ನರಸಿಂಹಯ್ಯರವರ ಹೆಸರನ್ನು ನಾಮಕರಣ ಮಾಡುವುದು ಸೂಕ್ತ ಹಾಗೂ ಅರ್ಥ ಗರ್ಭಿತ ಎಂದು ವೇದಿಕೆಯ ಅಧ್ಯಕ್ಷ ಬಿ.ಎಚ್. ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ಸಿಟಿಯಿಂದ 18 ಕಿಮೀ ದೂರದಲ್ಲಿರುವ ಪಂಚಮುಖಿ ಗಣಪತಿ ದೇವಾಲಯದ ನಿಲ್ದಾಣಕ್ಕೆ (ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ, ಕೆಂಗೇರಿ) ಗುರು ಜ್ಞಾನ ಕೇಂದ್ರ ಮೆಟ್ರೋ ಸ್ಟೇಷನ್ ಎಂದು ಹೆಸರಿಡಬೇಕೆಂದು ಅವರು ವಿನಂತಿಸಿದ್ದಾರೆ.

NEWS DESK

TIMES OF BENGALURU