ಬೆಂಗಳೂರು : ಯುವತಿಯೊಂದಿಗಿನ ಸೆಕ್ಸ್ ಸಿಡಿ ರಿಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಮಹತ್ವದ ಮಾಹಿತಿ ನೀಡುತ್ತೇನೆ, ಆಕೆಯ ಆರೋಪಗಳಿಗೆಲ್ಲ ಉತ್ತರಿಸುತ್ತೇನೆ ಎಂದು ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಅಜ್ಞಾತವಾಗಿದ್ದುಕೊಂಡೇ ಸಿಡಿ ಯುವತಿ ರಮೇಶ್ ಜಾರಕಿಹೊಳಿ ಆರೋಪಗಳಿಗೆ ವಿಡಿಯೋ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.
ಆಕೆ ತನ್ನ ಮನೆಯವರೊಂದಿಗೆ ಮಾತನಾಡಿದ್ದ ಆಡಿಯೋವೊಂದು ನಿನ್ನೆ ಲೀಕ್ ಆಗಿತ್ತು. ಅದರಲ್ಲಿ ಆಕೆ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಇಂದು ಮತ್ತೊಂದು ಬಾಂಬ್ ಸ್ಫೋಟಿಸಲು ರಮೇಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದು, ಇಂದು ಸಂಜೆ 4ರಿಂದ 6 ಗಂಟೆಯೊಳಗೆ ವಿಡಿಯೋ ಅಥವಾ ಆಡಿಯೋ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾನು ಇದನ್ನೆಲ್ಲ ಮೊದಲೇ ಊಹಿಸಿದ್ದೆ. ಇಂದಿನಿಂದ ನನ್ನ ಅಸ್ತ್ರ, ಆಟ ಶುರುವಾಗಲಿದೆ. ಈ ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ನನ್ನನ್ನು ನೇಣಿಗೇರಿಸಲಿ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಇಂದು ಮಹತ್ವದ ಮಾಹಿತಿ ರಿಲೀಸ್ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
NEWS DESK
TIMES OF BENGALURU