ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಜಪಾನ್ನ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) 3,717 ಕೋಟಿ ರೂ. ಸಾಲ ನೀಡುವುದಾಗಿ ಘೋಷಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಜೈಕಾ ಮಧ್ಯೆ ಶುಕ್ರವಾರ ಒಪ್ಪಂದ ಏರ್ಪಟ್ಟಿದೆ.
ಕೇಂದ್ರ ಹಣಕಾಸು ಇಲಾಖೆ ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಡಾ.ಸಿ.ಎಸ್. ಮಹಾಪಾತ್ರ ಮತ್ತು ಜೈಕಾ ಮುಖ್ಯ ಪ್ರತಿನಿಧಿ ಮಾಟ್ಸುಮೊಟೊ ಕಾಟ್ಸುವೊ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎರಡನೇ ಹಂತದ ನಾಗವಾರ, ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್. ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದವರೆಗೆ ನಿರ್ಮಾಣ ಯೋಜನೆಗೆ ಈ ಹಣವನ್ನು ಬಳಸಿಕೊಳ್ಳುವ ಉದ್ದೇಶವಿದೆ.
NEWS DESK
TIMES OF BENGALURU