ಬೆಂಗಳೂರು: ಪ್ರಗತಿ ಶಾಲೆಯ ತಂಡವು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಂದ ಸಾಮಾಜಿಕ ಸಂದೇಶವುಳ್ಳ ಧನ್ಯವಾದ-2.0 ಎಂಬ ನಾಟಕ ಪ್ರದರ್ಶನವನ್ನು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಶುಕ್ರವಾರ ಏರ್ಪಡಿಸಿತ್ತು.ಆನೇಕಲ್ ತಾಲ್ಲೂಕಿನ ಮುಗಲೂರು ಕ್ಲಸ್ಟರ್ ವ್ಯಾಪ್ತಿಗೆ ಬರುವ 13 ಸರ್ಕಾರಿ ಶಾಲೆಗಳ 25 ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಸಾಮಾಜಿಕವಾಗಿ ತೊಡಗಿಸುವುದು ಹಾಗೂ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅವರಿಂದಲೇ ನಾಟಕ ಪ್ರದರ್ಶನ ಏರ್ಪಡಿಸಿದೆವು. ಕೊರೊನಾ ಇದ್ದ ಕಾರಣಕ್ಕೆ ಭೌತಿಕ ಹಾಗೂ ಆನ್ಲೈನ್ ಮೂಲಕವೂ ನಾಟಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಜಾಗತಿಕ ವೇದಿಕೆ ಕಲ್ಪಿಸಿದೆವು’ ಎಂದು ಪ್ರಗತಿ ಶಾಲೆಯ ಮುಖ್ಯಸ್ಥ ವಿನಯ್ ಶಿಂಧೆ ತಿಳಿಸಿದರು.
NEWS DESK
TIMES OF BENGALURU