ಬೆಂಗಳೂರು: ಸಿಡಿ ಪ್ರಕರಣದ ಮಹಾನಾಯಕ ಯಾರೆಂದು ಸಧ್ಯದಲ್ಲೇ ಸಷ್ಟವಾಗಿ ಗೊತ್ತಾಗುವ ಕಾಲ ಬಂದಿದೆ. ಒಂದಲ್ಲ ಒಂದು ದಿನ ಯುವತಿ ಬಾಯ್ಬಿಡುತ್ತಾಳೆ ಎಂಬುದು ಗೊತ್ತಿತ್ತು. ಇದೀಗ ಹೆಸರನ್ನು ಆಕೆ ಪ್ರಸ್ತಾಪಿಸಿದ್ದಾಳೆ ಎಂದು ಸಚಿವ ಎಸ್.ಟಿ. ಸೋಮಶೇಖರ್, ಡಿ.ಕೆ. ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅಚ್ಚರಿಯ ವಿಷಯವೇನಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದರು. ಸಿಡಿ ಹಿಂದಿನ ಮಹಾನಾಯಕ ಯಾರಿರಬಹುದು ಎಂಬ ಕುತೂಹಲ ನನ್ನನ್ನೂ ಸೇರಿದಂತೆ ಇಡೀ ರಾಜ್ಯದ ಜನರಲ್ಲಿ ಇತ್ತು. ಈಗ ಸ್ವತಃ ಯುವತಿಯೇ ಓರ್ವರ ಹೆಸರನ್ನು ಪ್ರಸ್ತಾಪಿಸಿದ್ದಾಳೆ. ಈ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ. ಆ ಮಹಾನಾಯಕ ಯಾರೆಂಬುದು ಹೊರಬರಬೇಕು ಎಂದು ಹೇಳಿದರು.
NEWS DESK
TIMES OF BENGALURU