ಸಿಡಿ ಲೇಡಿ ಕರ್ನಾಟಕದಲ್ಲೇ ಇದ್ದಾಳೆ..!

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನ ಯುವತಿ ಎಲ್ಲಿದ್ದಾಳೆ. ಕಳೆದ 25 ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ಸಿಡಿ ಲೇಡಿ ಮತ್ತು ಪ್ರಕರಣದ ಕಿಂಗ್‍ಪಿನ್ ನರೇಶ್‍ಗೌಡ ಹಾಗೂ ಹ್ಯಾಕರ್ ಶ್ರವಣ್‍ಗಾಗಿ ಎಸ್‍ಐಟಿ ಪೊಲೀಸರು ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದಾರೆ. ಕಿಂಗ್‍ಪಿನ್ ಮತ್ತು ಹ್ಯಾಕರ್ ಉತ್ತರ ಭಾರತದಲ್ಲಿದ್ದಾರೆ, ಹಾಗೆಯೇ ಸಿಡಿ ಲೇಡಿಯು ಸಹ ಕರ್ನಾಟಕದಲ್ಲೇ ಇದ್ದಾಳೆ ಎನ್ನಲಾಗುತ್ತಿದೆ.

ಇಂದು ಸಿಕ್ಕ ಮಾಹಿತಿ ಪ್ರಕಾರ ಸಿಡಿ ಯುವತಿ ಬೆಂಗಳೂರು ಹೊರಹೊಲಯದಲ್ಲೇ ಇದ್ದಾಳಂತೆ. ಕಾರು ಚಾಲಕ ಪರಶಿವಮೂರ್ತಿ ಎಂಬಾತ ಈಕೆಯ ಜತೆಯಲ್ಲಿದ್ದಾನಂತೆ. ಉದ್ಯಮಿ ವಕುಮಾರ್​ರ ಕಾರು ಚಾಲಕ ಪರಶಿವಮೂರ್ತಿಯಿಂದ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಆಸುಪಾಸಿನಲ್ಲೇ ಇದ್ದುಕೊಂಡು ಯುವತಿ ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸುತ್ತಿದ್ದಾಳೆ ಎನ್ನಲಾಗುತ್ತಿದೆ. ರೂಂ ಚೆಕ್‍ಔಟ್ ಮಾಡಲು ಕೆಲವೇ ಕ್ಷಣ ಇರುವಾಗ ವಿಡಿಯೋ ಮಾಡಿ ಮೊಬೈಲ್ ಮೂಲಕ ಕಳಿಸಿ ಬಳಿಕ ಆಫ್ ಮೊಬೈಲ್ ಅನ್ನು ಆಫ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

NEWS DESK

TIMES OF BENGALURU