4 ಬಾರಿ ಕಾಳ್ಗಿಚ್ಚಿಗೆ ಗುರಿಯಾದ ತುರಹಳ್ಳಿಯ ಅರಣ್ಯ

ಬೆಂಗಳೂರು: ನಗರದಲ್ಲಿ ಸರ್ಕಾರದ ಪ್ರತಿಷ್ಠಿತ ಯೋಜನೆ ವೃಕ್ಷೋದ್ಯಾನ ನಿರ್ಮಾಣಕ್ಕೆ ವಿರೋಧಿಸಿದ ತುರಹಳ್ಳಿ ಅರಣ್ಯಕ್ಕೆ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ಬೆಂಕಿ ಬಿದ್ದಿದೆ. ಗುರುವಾರ ತಡರಾತ್ರಿ 12 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 2 ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗಾಹುತಿ ಆಗಿದೆ.

ಮಾರ್ಚ್ ತಿಂಗಳು ಮುಗಿಯುವ ಮುನ್ನವೇ ಎಂದರೆ ಕೇವಲ 26 ದಿನಗಳಲ್ಲಿ 4 ಬಾರಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮರಗಳು ಹೆಚ್ಚು ಒತ್ತೊತ್ತಾಗಿರದ ಹಿನ್ನೆಲೆಯಲ್ಲಿ ನೈಸರ್ಗಿಕ ಕಾರಣದಿಂದ ಬೆಂಕಿ ಬೀಳುವ ಸಾಧ್ಯತೆ ಇಲ್ಲ. ಹೀಗಾಗಿ, ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿ ಮೆರೆಯುತ್ತಿದ್ದಾರೆ. ಒಂದು ಬಾರಿ ಅರಣ್ಯದ ಗಡಿಯಲ್ಲಿ ಬೆಂಕಿ ಹಚ್ಚಿದ್ದು, ಅರಣ್ಯ ಪ್ರವೇಶದ ಮೊದಲೇ ತಡೆಯಲಾಗಿತ್ತು. ಮಾ.13ರಂದು ಕಾಣಿಸಿಕೊಂಡ ಬೆಂಕಿಗೆ 1 ಎಕರೆ ಪ್ರದೇಶ ಸುಟ್ಟಿತ್ತು. ಮಾ.17ರಂದೂ ಬೆಂಕಿ ಕಾಣಿಸಿಕೊಂಡಿತ್ತು. ಈಗ ಗುರುವಾರ ತಡರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, 2 ಎಕರೆಗೂ ಅಧಿಕ ಪ್ರದೇಶದ ಕಾಡು ಸುಟ್ಟು ಹೋಗಿದೆ.

NEWS DESK

TIMES OF BENGALURU