ಏಪ್ರಿಲ್ 1ರಿಂದ ಹಾಲಿನ ದರ ಹೆಚ್ಚಳ

ಬೆಂಗಳೂರು : ಹಾಲು ಉತ್ಪಾದಕರಿಗೆ ಬೆಂಗಳೂರು ಹಾಲು ಒಕ್ಕೂಟ ಭರ್ಜರಿ ಸಿಹಿಸುದ್ದಿ ನೀಡಿದ್ದು, ರೈತರಿಗೆ 1 ರೂ. ಹಾಲಿನ ದರ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ 1 ರೂ. ಹಾಲಿನ ದರ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಏಪ್ರಿಲ್ 1 ರಿಂದ ಒಂದು ಲೀಟರ್ ಹಾಲಿಗೆ 1.50 ರೂ. ಹೆಚ್ಚಾಗಲಿದೆ. ಫ್ಯಾಟ್ ಹೆಚ್ಚಾದಂತೆ 22 ಪೈಸೆಯಂತೆ ಹೆಚ್ಚಿಸಲಾಗುತ್ತದೆ. ಇದರಿಂದ ರೈತರಿಗೆ ಅಧಿಕ ಹಣ ಸಿಗಲಿದೆ. ಜೊತೆಗೆ ಎಂಪಿಸಿಎಸ್ 1.5 ರೂ. ನಿರ್ವಹಣಾ ವೆಚ್ಚ, ಕಾರ್ಯನಿರ್ವಾಹಕ ಅಧಿಕಾರಿಗೆ 40 ಪೈಸೆ ಇನ್ಸೆಂಟಿವ್ ಕೂಡ ನೀಡಲಿದ್ದೇವೆ ಎಂದರು.

NEWS DESK

TIMES OF BENGALURU