ಸ್ವಸ್ತಿಕ್ ಯೂನಿಯನ್ ಸಿಸಿಗೆ ಜಯ

ಬೆಂಗಳೂರು: ಸೃಜನ್ ನಂದನ್ (ಔಟಾಗದೆ 98) ಅವರ ಅಮೋಘ ಆಟದ ನೆರವಿನಿಂದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ (2) ತಂಡವು ಕೆಎಸ್‍ಸಿಎ ಗುಂಪು 1, 2, 3ನೇ ಡಿವಿಷನ್ ಅಂತರಕ್ಲಬ್ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್‍ಗಳಿಂದ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡವನ್ನು ಪರಾಭವಗೊಳಿಸಿತು.

ಇಲ್ಲಿನ ಆರ್ ಎಸ್‍ಐ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಲ್ಚರ್ಸ್, ಕಾರ್ತಿಕೇಯ ಕೆ.ಪಿ. (ಔಟಾಗದೆ 97) ಅವರ ಆಟದ ಬಲದಿಂದ 50 ಓವರ್ ಗಳಲ್ಲಿ 181 ರನ್‍ಗಳ ಸವಾಲಿನ ಮೊತ್ತ ಪೇರಿಸಿತು. ಸ್ವಸ್ತಿಕ್ ಯೂನಿಯನ್ ತಂಡದ ಮಾಂಕಾಳೇಶ್ ಐದು ವಿಕೆಟ್ ಗಳಿಸಿದರು. ಈ ಗುರಿಯನ್ನು ಸ್ವಸ್ತಿಕ್ ಯೂನಿಯನ್ ತಂಡ 34ನೇ ಓವರ್‍ನಲ್ಲಿ ತಲುಪಿ ವಿಜಯ ಸಾಧಿಸಿದೆ.

NEWS DESK

TIMES OF BENGALURU