ಬೆಂಗಳೂರು: ನಕಲಿ ಕೀ ಮಾಡಿಸಿಟ್ಟುಕೊಂಡು ಸಾರ್ವಜನಿಕರ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿ ಅನಿಲ್ಕುಮಾರ್ನನ್ನು (24) ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಕಾವೇರಿಪುರ ನಿವಾಸಿ ಅನಿಲ್ಕುಮಾರ್, ಹಲವು ದಿನಗಳಿಂದ ಕೃತ್ಯ ಎಸಗುತ್ತಿದ್ದ. ಆತನಿಂದ 8.15 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರುದ್ಯೋಗಿಯಾಗಿದ್ದ ಆರೋಪಿ, ಕಳ್ಳತನದಿಂದಲೇ ಹಣ ಸಂಪಾದನೆ ಮಾಡುತ್ತಿದ್ದ. ನಕಲಿ ಕೀ ಮಾಡಿಟ್ಟುಕೊಂಡಿದ್ದ ಆರೋಪಿ, ಮನೆ ಮುಂದೆ ನಿಲ್ಲಿಸುತ್ತಿದ್ದ ಹಾಗೂ ಪಾಕಿರ್ಂಗ್ ಜಾಗದಲ್ಲಿರುತ್ತಿದ್ದ ಬೈಕ್ಗಳನ್ನು ಕದ್ದೊಯ್ಯುತ್ತಿದ್ದ. ಇಂಥ ಬೈಕ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಖರೀದಿದಾರರು, ದಾಖಲೆ ಕೇಳಿದರೆ ಕೆಲ ದಿನ ಬಿಟ್ಟು ಕೊಡುವುದಾಗಿ ಹೇಳಿ ನಾಪತ್ತೆಯಾಗುತ್ತಿದ್ದ. ಕೆಲ ಬೈಕ್ಗಳನ್ನು ಆರೋಪಿಯೇ ಬಳಕೆ ಮಾಡುತ್ತಿದ್ದ ಎಂದೂ ತಿಳಿಸಿದರು.
NEWS DESK
TIMES OF BENGALURU