ಕೋವಿಡ್ 2ನೇ ಅಲೆ; ಮಕ್ಕಳಲ್ಲಿ ಹೆಚ್ಚು ಪ್ರಕರಣ

ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಆರಂಭವಾಗಿದೆ. ಸರ್ಕಾರ ಸೋಂಕು ಹಡುವಿಕೆ ತಡೆಯಲು ಹಲವು ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರದ ಮಾಹಿತಿ ಅನ್ವಯ ಮಕ್ಕಳಲ್ಲಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ಹೊಸ ಕೋವಿಡ್ ಪ್ರಕರಣಗಳಲ್ಲಿ 1 ರಿಂದ 10ನೇ ವರ್ಷದ ಮಕ್ಕಳಲ್ಲಿ ಸೋಂಕು ಕಂಡು ಬರುತ್ತಿದೆ. ಮಾರ್ಚ್ 14 ರಿಂದ 21ರ ತನಕ ಬೆಂಗಳೂರು ನಗರದಲ್ಲಿ 160 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಶನಿವಾರ ಮತ್ತು ಭಾನುವಾರ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಕ್ರಮವಾಗಿ 33 ಮತ್ತು 32 ಪ್ರಕರಣ ಪತ್ತೆಯಾಗಿದೆ. ರಾಜ್ಯ ಕೋವಿಡ್ ವಾರ್ ರೂಂ ಮಾಹಿತಿ ಪ್ರಕಾರ ಎರಡು ವಾರದಲ್ಲಿ 267 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕಾಗಿದೆ.

NEWS DESK

TIMES OF BENGALURU