ಗಣಿ ಅಧಿಕಾರಿಗಳಿಗೆ ಪೊಲೀಸ್ ಡ್ರೆಸ್

ಬೆಂಗಳೂರು: ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳುವ ಕಾರಣದಿಂದ ಗಣಿ ಅಧಿಕಾರಿಗಳಿಗೆ ಪೊಲೀಸ್ ಡ್ರೆಸ್ ನೀಡಲಾಗುವುದು. ಅವರ ದರ್ಜೆಗೆ ತಕ್ಕ ಸ್ಟಾರ್ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಅಧಿಕಾರಿಗಳಿಗೆ ಡ್ರೆಸ್ ಇರುವಂತೆ ಗಣಿ ಅಧಿಕಾರಿಗಳಿಗೂ ಸಮವಸ್ತ್ರವಿದ್ದರೆ ಶಿಸ್ತು ಬರುತ್ತದೆ. ಗಣಿಗಾರಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ನೆಮಿಸಿಕೊಳ್ಳಲು ಚರ್ಚೆ ನಡೆಯುತ್ತಿದೆ. ಸೆಕ್ಯುರಿಟಿ ಹೊರಗುತ್ತಿಗೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು, ಪ್ರತಿ ಜಿಲ್ಲೆಗೆ ಐದು ಜನರನ್ನು ನೇಮಿಸಿಕೊಳ್ಳಲಾಗುವುದು ಎಂದರು.

ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ಬಳಿಕ ರಾಜ್ಯದಲ್ಲಿ ಗಣಿ ಮತ್ತು ಕ್ರಷರ್ ಉದ್ಯಮ ಸಂಪೂರ್ಣವಾಗಿ ಸ್ತಬ್ದಗೊಂಡಿದೆ. ಈ ಉದ್ಯಮವನ್ನು ಪುನಾರಂಭಿಸಬೇಕಾದರೆ ಸ್ಫೋಟಕಗಳನ್ನು ಬಳಸುವುದು ಅನಿವಾರ್ಯ ಎಂದರು. ಈಗಿರುವ ನಿಯಮವನ್ನು ಮುಂದುವರೆಸಿದರೆ ಉದ್ಯಮವನ್ನು ನಡೆಸುವುದೇ ಕಷ್ಟಕರ. ಈ ಹಿನ್ನೆಲೆಯಲ್ಲಿ ಮಾಲೀಕರು ಸ್ಫೋಟಕಗಳನ್ನು ಬಳಸಲು ಅರ್ಜಿ ಸಲ್ಲಿಸಿದರೆ ಗಣಿ ಸುರಕ್ಷತಾ ಮಹಾನಿರ್ದೇಶಕರು 90 ದಿನದೊಳಗೆ ಪರಾವನಗಿ ನೀಡುವಂತೆ ನಿಯಮವನ್ನು ಜಾರಿ ಮಾಡುವುದಾಗಿ ತಿಳಿಸಿದರು.

NEWS DESK

TIMES OF BENGALORE