ಅಂತಃಸ್ಫೋಟ ಕೃತಿ ಬಿಡುಗಡೆ

ಬೆಂಗಳೂರು: ಲೇಖಕಿ ಸರಸ್ವತಿ ಶಂಕರ್ ಅವರ ವೈಚಾರಿಕ ಕಾದಂಬರಿ ಅಂತಃಸ್ಫೋಟ ಬಿಡುಗಡೆ ಮಾಡಿದರು. ಖ್ಯಾತ ಸಾಹಿತಿ ಮತ್ತು ಸಂಶೋಧಕರಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜರು ಬೆಂಗಳೂರಿನ ಕ್ಷಿಪ್ರ ಬೆಳವಣಿಗೆಯಿಂದಾಗಿ ಉದ್ಭವಿಸಿದ ವಿವಿಧ ಸಮಸ್ಯೆಗಳನ್ನು ಈ ಕೃತಿಯಲ್ಲಿ ಕಲಾತ್ಮಕವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

ನಗರದ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್.ಪಂಜಾಜೆಯವರು ಸರಸ್ವತಿ ಶಂಕರ್ ಅವರ ಹದಿನಾರು ಹನಿ ಕಥಾಸಂಕಲನದ ಪರಿಚಯ ಮಾಡಿಕೊಟ್ಟರು. ಕವಿ ಮತ್ತು ಸಂಸ್ಕೃತಿ ಚಿಂತಕರಾದ ಭ.ರಾ.ವಿಜಯ ಕುಮಾರ್ ಅವರು ಎಸ್ ರಾಮಚಂದ್ರಪ್ಪ ಅವರ ಉದ್ಯೋಗ ಪರ್ವ ಎಂಬ ಅನುಭವ ಕಥನವನ್ನು ಪರಿಚಯಿಸಿದರು. ಲೇಖಕರು ತಮ್ಮ ಕೃತಿಗಳ ಕುರಿತು ಮಾತನಾಡಿದರು.

 

NEWS DESK

TIMES OF BENGALURU