ಯುವತಿ ದೂರು ನೀಡುವವರೆಗೂ ಬಂಧಿಸಲಾಗುವುದಿಲ್ಲ

ಬೆಂಗಳೂರು: ಸಿಡಿ ಪ್ರಕರಣ ಕುರಿತಂತೆ ಎಸ್‍ಐಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್‍ಐಟಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಆದರೆ ಸಿಡಿ ಸಂತ್ರಸ್ತೆ ಬಂದು ಹೇಳಿಕೆ ಕೊಡುವವರೆಗೂ ಯಾರನ್ನು ಬಂಧಿಸೋದಿಲ್ಲ ಎಂಬುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಡಿ ಪ್ರಕರಣದಲ್ಲಿ ಯಾವುದೇ ಗೊಂದಲ ಬೇಡ. ಎಸ್‍ಐಟಿಗೆ ತನಿಖೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಸಂತ್ರಸ್ತೆ ಬಂದು ದೂರು ನೀಡುವವರೆಗೆ ಯಾರನ್ನು ಬಂಧಿಸಲು ಆಗುವುದಿಲ್ಲ ಎಂದು ತಿಳಿಸಿದರು.

 

NEWS DESK

TIMES OF BENGALURU