ಮತ್ತೆ ಏಪ್ರಿಲ್ 2ಕ್ಕೆ ರಮೇಶ ಜಾರಕಿಹೊಳಿ ವಿಚಾರಣೆ

ಬೆಂಗಳೂರು: ಸಿಡಿ ಪ್ರಕರಣದ ಸಂತ್ರಸ್ತ ಯುವತಿ ವಕೀಲ ಜಗದೀಶ್ ಮೂಲಕ ರಮೇಶ ಜಾರಕಿಹೊಳಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾಳೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ ಜಾರಕಿಹೊಳಿ ವಿರುದ್ದ ಎಫ್‍ಐರ್ ಸಹ ದಾಖಲಾಗಿದೆ. ದೂರು ದಾಖಲಾದ ಬಳಿಕ ಇಂದು ಮೊದಲ ಬಾರಿಗೆ ಜಾರಕಿಹೊಳಿಯವರನ್ನು ವಿಚಾರಣೆ ನಡೆಸಿದರು. ವಿಚಾರಣೆಯನ್ನು ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಪೂರ್ಣಗೊಳಿಸಿದ್ದಾರೆ.

ಏಪ್ರಿಲ್ 2ರಂದು ಪುನಃ ವಿಚಾರಣೆಗೆ ಆಗಮಿಸಬೇಕು ಎಂದು ಸೂಚನೆಯನ್ನು ಕೊಟ್ಟಿದ್ದಾರೆ. ವಕೀಲರ ಜೊತೆ ರಮೇಶ್ ಜಾರಕಿಹೊಳಿ ಅಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್‍ನಲ್ಲಿ ವಿಚಾರಣೆಯನ್ನು ಎದುರಿಸಿದರು. ಪೊಲೀಸರು ಜಾರಕಿಹೊಳಿಯವರನ್ನು ಸುಮಾರು ನಾಲ್ಕೂವರೆ ತಾಸು ವಿಚಾರಣೆ ನಡೆಸಿದರು. ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ವಕೀಲರ ಜೊತೆ ಚರ್ಚಿಸುತ್ತೇನೆ. 4 ದಿನದ ಕಾಲಾವಕಾಶ ನೀಡಿ ಎಂದು ಪೊಲೀಸರಿಗೆ ಮನವಿ ಮಾಡಿದರು.

 

NEWS DESK

TIMES OF BENGALURU