ಮುಷ್ಕರ ಮಾಡಿದ್ರೆ ಖಾಸಗಿ ಬಸ್‍ಗಳು ಸಂಚಾರ

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಇರಿಸಿಕೊಂಡು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಆಪರೇಟರ್‍ಗಳನ್ನು ಮುಂದಿರಿಕೊಂಡು ಟಕ್ಕರ್ ನೀಡಲು ಸರ್ಕಾರ ಮುಂದಾಗಿದೆ.

ಏಪ್ರಿಲ್ 7 ರಂದು ಸರ್ಕಾರಿ ಬಸ್ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಖಾಸಗಿ ಬಸ್‍ಗಳ ಜತೆ ಕೈಜೋಡಿಸಲು ಸಿದ್ಧವಾಗಿದೆ. ರಾಜ್ಯದಲ್ಲಿ 10 ಸಾವಿರ ಖಾಸಗಿ ಬಸ್ ಹಾಗೂ 1 ಲಕ್ಷ ಟ್ಯಾಕ್ಸಿಗಳಿದ್ದು, ಒಂದೊಮ್ಮೆ ಬಸ್‍ಗಳನ್ನು ನಿಲ್ಲಿಸಿದ್ದೇ ಆದಲ್ಲಿ ಈ ಖಾಸಗಿ ಬಸ್‍ಗಳು ಸಂಚರಿಸಲಿವೆ ಎಂದು ಹೇಳುವ ಮೂಲಕ ಸಾರಿಗೆ ನೌಕರರಿಗೆ ಶಾಕ್ ನೀಡಿದೆ.

NEWS DESK

TIMES OF BENGALURU