ಬೆಂಗಳೂರು: ಮಾರತಹಳ್ಳಿ ಮೇಲ್ಸೇತುವೆ ಬಳಿ ಇರುವ ಯುನಿಮೊನಿ ಫೈನಾನ್ಯಿಯಲ್ ಸರ್ವೀಸ್ ಲಿಮಿಟೆಡ್ ಬ್ಯಾಂಕ್ನ ಗೋಡೆ ಕೊರೆದು ಚಿನ್ನಾಭರಣ ಕದ್ದಿದ್ದ ಹತ್ತು ಮಂದಿ ಆರೋಪಿಗಳನ್ನು ಎಚ್ ಎ ಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 22.50 ಲಕ್ಷ ಮೌಲ್ಯದ 450 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಬ್ಯಾಂಕ್ನ ಗೋಡೆ ಕೊರೆದು ಒಳಗೆ ನುಗ್ಗಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ಕಿತ್ತು ಹಾಕಿದ್ದರು. ಗ್ಯಾಸ್ ಕಟ್ಟರ್ ನಿಂದ ಲಾಕರ್ ಕತ್ತರಿಸಿ ಚಿನ್ನಾಭರಣ, ನಗದು ಹಾಗೂ ವಿದೇಶಿ ಕರೆನ್ಸಿ ಕದ್ದುಕೊಂಡು ಪರಾರಿಯಾಗಿದ್ದರು. ಹೀಗೆ ಇವರು ಹೊರ ರಾಜ್ಯಗಳಲ್ಲಿಯೂ ಕಳ್ಳತನ ಮಾಡುತ್ತಿದ್ದರು. ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬರುತ್ತಿದ್ದರು. ಖಚಿತ ಮಾಹಿತಿ ಸಂಗ್ರಹಿಸಿ ಹೊರ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಹೇಳಿದರು.
NEWS DESK
TIMES OF BENGALURU