ಮಕ್ಕಳ ದಾಖಲಾತಿಗಳಿಲ್ಲದೆ ಶಾಲೆ ಕ್ಲೋಸ್

ಬೆಂಗಳೂರು : ವಿದ್ಯಾರ್ಥಿಗಳಿಲ್ಲದೆ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆಯೊಂದನ್ನು ಮುಚ್ಚಲಾಗಿದೆ. 1870ರಲ್ಲಿ ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಮಾಡೆಲ್ ಸ್ಕೂಲ್ ಆಫ್ ಎಜುಕೇಷನ್ ಸೊಸೈಟಿ ಮೊದಲ ಕನ್ನಡ ಮೀಡಿಯಂ ಶಾಲೆಯನ್ನು ಸ್ಥಾಪನೆ ಮಾಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿಯೇ ಇರಲಿಲ್ಲ ಹಾಗಾಗಿ ಅನಿವಾರ್ಯವಾಗಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಯಲ್ಲಿ ಈಗ ಮಾಸಿದ ಕಪ್ಪು ಬೋರ್ಡ್ ಮುರಿದ ಕುರ್ಚಿ, ವಿದ್ಯಾರ್ಥಿಗಳಿಲ್ಲ ಬೆಂಚುಗಳನ್ನು ನೋಡಬಹುದು.

ಇನ್ನೂ ಶಾಲೆಯ ನಾಮಫಲಕವನ್ನು ಕೂಡ ಶುಚಿಗೊಳಿಸುವವರಿಲ್ಲ, ಜಿಆರ್ ವಿಶ್ವನಾಥ್ ಹಾಗೂ ನಟ ವಿಷ್ಣುವರ್ಧನ್ ಕೂಡ ಇದೇ ಶಾಲೆಯಲ್ಲಿ ಕಲಿತವರು. ಕಿರಿಯ ಪ್ರಾಥಮಿಕ ಶಾಲೆಯಾಗಿದ್ದ ಮಾಡೆಲ್ ಹೈಸ್ಕೂಲ್ 1957ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತ್ತು. ಹಾಗೆಯೇ ಬಿಸಿಯೂಟ ವ್ಯವಸ್ಥೆಯೂ ಕೂಡ ಇತ್ತು. ಶಾಲೆಯನ್ನು ಮುಚ್ಚುವ ಮೊದಲು ಸುಮಾರು ಎರಡು ಮೂರು ವರ್ಷಗಳ ಕಾಲ ನಾವು ಗಮನಿಸಿದ್ದೇವೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿತ್ತು.

NEWS DESK

TIMES OF BENGALURU