ಚಿನ್ನ ಗೆದ್ದು ಸಂಭ್ರಮಿಸಿದ ಮೋನ್ಯಾ ಕೌಸುಮಿ

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ ಮೋನ್ಯಾ ಕೌಸುಮಿ  ಅವರು ಸೋಮವಾರ ಇಲ್ಲಿ ಆರಂಭಗೊಂಡ ರಾಜ್ಯ ಸಬ್ ಜೂನಿಯರ್ ಈಜು ಕೂಟದಲ್ಲಿ ಮೂರು ಚಿನ್ನ ಗೆದ್ದು ಸಂಭ್ರಮಿಸಿದರು.

ಪಡುಕೋಣೆ-ದ್ರಾವಿಡ್ ಸೆಂಟರ್ ಆಫ್ ಸ್ಪೋಟ್ರ್ಸ್ ಎಕ್ಸಲೆನ್ಸ್‍ನಲ್ಲಿ ನಡೆಯುತ್ತಿರುವ ಕೂಟದ ಬಾಲಕಿಯರ ಗುಂಪು ಮೂರರ 50 ಮೀಟರ್ಸ್ ಬ್ರೆಸ್ಟ್ ಸ್ಟ್ರೋಕ್, 50 ಮೀ ಬಟರ್‍ಫ್ಲೈ ಮತ್ತು 100 ಮೀ ಫ್ರೀಸ್ಟೈಲ್‍ನಲ್ಲಿ ಅವರು ಮೊದಲಿಗರಾದರು. ರಾಷ್ಟ್ರೀಯ ಆಹ್ವಾನಿತ ಈಜು ಕೂಟವೂ ಸೋಮವಾರ ಆರಂಭಗೊಂಡಿದ್ದು ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ ಪಾರಮ್ಯ ಮೆರೆಯಿತು.

NEWS DESK

TIMES OF BENGALURU