ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ದಾಖಲಿಸಿರುವ ಅತ್ಯಾಚಾರ ಕೇಸ್ ನ ತನಿಖಾಧಿಕಾರಿ ಬದಲಾಗಿದ್ದಾರೆ.ಈ ಹಿಂದೆ ಕಬ್ಬನ್ಪಾರ್ಕ್ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಮಾರುತಿ ತನಿಖೆ ನಡೆಸುತ್ತಿದ್ದರು. ಪ್ರಕರಣದ ತನಿಖೆ ನಡೆಸಲು ಎಸಿಪಿ ಕವಿತಾ ಅವರನ್ನು ನೇಮಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಸಂಚಾರಿ ಎಸಿಪಿಯಾಗಿರುವ ನೂತನ ತನಿಖಾಧಿಕಾರಿ ಕವಿತಾ, ವಿಚಾರಣೆಗೆ ಹಾಜರ್ ಆಗುವಂತೆ ಯುವತಿಗೆ ನೋಟಿಸ್ ನೀಡಿದ್ದಾರೆ.ಇತ್ತ ಸಿಡಿ ಲೇಡಿ ಪ್ರಕರಣವು 1ನೇ ಎಸಿಎಂಎಂ ಕೋರ್ಟ್ ಗೆ ವರ್ಗಾವಣೆಯಾಗಿದ್ದು, ಇಂದು ಮಧ್ಯಾಹ್ನ ಕೋರ್ಟ್ ಗೆ ಸಿಡಿ ಲೇಡಿ ಬರುವ ಸಾಧ್ಯತೆ ಇದೆ.
NEWS DESK
TIMES OF BENGALURU