ಗಣಿಗಾರಿಕೆ, ಕ್ರಷರ್‌ಗಳ ಪುನರಾರಂಭಿಸಲು ಅನುಮತಿ

ಬೆಂಗಳೂರು: ಗಣಿಗಾರಿಕೆ ಮತ್ತು ಕ್ರಷರ್‌ಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗುವುದು ಎಂದು ಮುರುಗೇಶ ನಿರಾಣಿ ಸೋಮವಾರ ಹೇಳಿದ್ದಾರೆ. ವಿದಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಗಿತಗೊಂಡಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ ಇದಕ್ಕೂ ಮುನ್ನ ಗಣಿಗಳನ್ನು ಪುನರಾರಂಭಿಸುವವರು ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ (ಡಿಜಿಎಂಎಸ್) 90 ದಿನಗಳ ಒಳಗೆ ಪರವಾನಗಿ ಪಡೆಯಬೇಕು ಎಂದು ಹೇಳಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಸ್ಫೋಟ ಕಾರಣ ಗಣಿಗಳ ಚಟುವಟಿಕೆ ನಿಂತು ಹೋಗಿದೆ. ಇದರಿಂದ 300 ರೂ. ಕೋಟಿ ಆದಾಯ ನಷ್ಟವಾಗಿದೆ. ಕ್ರಷರ್‌ಗಳು ನಿಂತಿರುವುದರಿಂದ ಕಚ್ಚಾ ಸಾಮಗ್ರಿಗಳ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಪರವಾನಗಿ ಪಡೆಯದೇ ಗಣಿ ಪುನರಾರಂಭಿಸಲು ಸಾಧ್ಯವಿಲ್ಲ. ಮುಚ್ಚಳಿಕೆ ಬರೆಸಿಕೊಂಡು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುವುದು. ಎರಡು ಕೆ.ಜಿ.ಯಷ್ಟು ಸ್ಫೋಟಕಗಳನ್ನು ಗಣಿಯಲ್ಲಿ ಬಳಸಲು ಅವಕಾಶ ಇದೆ. ಸ್ಫೋಟಕ ಬಳಕೆಯಿಲ್ಲದೆಯೇ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ. ಆದರೆ ಎನ್‌ಒಸಿ ಪಡೆಯಲೇ ಬೇಕು ಎಂದಿದ್ದಾರೆ. ಗಣಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಗಣಿಗಳ ಪುನರಾರಂಭಕ್ಕೆ ಮನವಿ ಮಾಡಿದರು. ಆ ಬಳಿಕ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿ ಗಣಿಗಳ ಪುನರಾರಂಭಕ್ಕೆ ಅನುಮತಿ ನೀಡಿದರು.

 

NEWS DESK

TIMES OF BENGALURU