ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಹೇಳಿಕೆ ಪಡೆಯಲು 24 ನೇ ಎಸಿಎಂಎಂ ಕೋರ್ಟ್ ಅನುಮತಿ ನೀಡಿದ್ದು, ಕೊನೆಯ ಕ್ಷಣದಲ್ಲಿ ಯುವತಿ ಹೇಳಿಕೆ ಪಡೆಯುವ ಸ್ಥಳ ಬದಲಾಗಿದೆ. ಇದೀಗ ಸಿಡಿ ಲೇಡಿ ಗುರುನಾನಕ್ ಭವನ ಕೋರ್ಟ್ಗೆ ಹಾಜರಾಗಿದ್ದಾಳೆ. ಯುವತಿ ಸಧ್ಯ ಕೋರ್ಟ್ ಹಾಲ್ ನಲ್ಲಿದ್ದಾಳೆ. ಇತ್ತ ವಕೀಲ ಎಲ್ಲರ ಕಣ್ಣು ತಪ್ಪಿಸಿ ನ್ಯಾಯಾಲಯದೊಳಗೆ ಕರೆದೊಯ್ಯಬೇಕಿತ್ತು. ಹಾಗಾಗಿ ಯಾರಿಗೂ ಗೊತ್ತಾಗದಂತೆ ಕೋರ್ಟ್ನ ಅವರಣದೊಳಗೆ ಕರೆದೊಯ್ಯಲಾಗಿದೆ. ಅರ್ಧ ಗಂಟೆ ಮುಂಚೆಯೇ ನ್ಯಾಯಾಲಯಕ್ಕೆ ಹಾಜರು ಪಡೆಸಿದ್ದೇನೆ. ಈಗಾಗಲೇ ಹೇಳಿಕೆ ಶುರುವಾಗಿದೆ ಎಂದು ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.
NEWS DESK
TIMES OF BENGALURU