ಅಬಕಾರಿ ಇಲಾಖೆಗೆ ನಿರೀಕ್ಷೆಗೂ ಹೆಚ್ಚು ಆದಾಯ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ 2020-21ನೇ ಸಾಲಿಗೆ 250-300 ಕೋಟಿ ರೂ. ಆದಾಯ ಸಂಗ್ರಹಣೆ ನಿರೀಕ್ಷೆ ಇದೆ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು. ಈ ವರ್ಷ 22,700 ಕೋಟಿ ರೂ. ಗುರಿ ಇತ್ತು ಆದರೆ ಅದು ಐದು ದಿನಗಳ ಹಿಂದೆಯೇ ಸಾಧನೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇಲಾಖೆಗೆ ಏಪ್ರಿಲ್ ನಲ್ಲಿ 77 ವಾಹನ ಖರೀದಿಸಲಾಗುತ್ತದೆ. ಇನ್ಸಪೆಕ್ಟರ್ ಅವರಿಗೆ 300 ಬೈಕ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರತಿ ಡಿಸಿ ಕಚೇರಿಗೆ 4 ಶಸ್ತ್ರಾಸ್ತ್ರ ಕೊಡುತ್ತೇವೆ ಎಂದರು. ಅನೇಕ ಕಡೆ ಗಾಂಜಾ ಬೆಳೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಗಾಂಜಾ ಅಫೀಮು ಸೇರಿದಂತೆ ಮಾದಕ ವಸ್ತು ಮಾರಾಟದ ವಿರುದ್ಧ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಜತೆ ಸೇರಿ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಾರೆ ಎಂದು ತಿಳಿಸಿದರು.

 

NEWS DESK

TIMES OF BENGALURU