ಅಂತಾರಾಜ್ಯ ಕಳ್ಳರನ್ನು ಸೆರೆ ಹಿಡಿದ ಪೊಲೀಸರು

ಬೆಂಗಳೂರು : ಸೆಕ್ಯೂರಿಟಿ ಏಜೆನ್ಸಿ ಕಚೇರಿ ತೆರೆಯುವ ನೆಪದಲ್ಲಿ ಕೊಠಡಿ ಬಾಡಿಗೆ ಪಡೆದು ಫೈನಾನ್ಸ್ ಕಂಪನಿಗೆ ಕನ್ನ ಹಾಕಿ 23.02 ಲಕ್ಷ ರೂ. ಮೌಲ್ಯದ ಆಭರಣ, ನಗದು ದೋಚಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್‍ನನ್ನು ಎಚ್‍ಎಎಲ್ ಪೊಲೀಸರು ಬಂಧಿಸಿದ್ದಾರೆ.

ಜಾಖರ್ಂಡ್ ಮೂಲದ ಮುರ್ ಸಲೀಂ ಶೇಖ್ (26), ನಜ್‍ರುಲ್ ಶೇಖ್ (42), ಕಮಲ್ ಪೌಜ್‍ದಾರ್ (44), ರಬಿವುಲ್ ಶೇ (23), ಜಮಿರುಲ್ ಶೇಕ್ (21), ಅಯಾಸ್ ಶೇಖ್ (37) ಸೇರಿ 10 ಮಂದಿಯನ್ನು ಬಂಧಿಸಲಾಗಿದೆ. 2020ರ ನ.29ರಂದು ಮಾರತ್‍ಹಳ್ಳಿ ಮುನೇಕೊಳಲು ಬಳಿ ಯುನಿಮೋನಿ ಫೈನಾನ್ಷಿಯಲ್ ಸರ್ವಿಸಸ್ ಪ್ರೈ.ಲಿ. ಕಂಪನಿ ಕಚೇರಿಗೆ ಕನ್ನ ಹಾಕಿ ಚಿನ್ನಾಭರಣ, ನಗದು ದೋಚಿದ್ದರು. ಕಂಪನಿ ಅಧಿಕಾರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ 22.50 ಲಕ್ಷ ರೂ. ಮೌಲ್ಯದ 450 ಗ್ರಾಂ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NEWS DESK

TIMES OF BENGALURU