ಬೆಂಗಳೂರು, ಶ್ರೀನಗರ ನಡುವೆ ವಿಮಾನ ಹಾರಾಟ

ಬೆಂಗಳೂರು: ಕೋವಿಡ್ 19 ನಂತರ ಒಂದು ವರ್ಷದ ಕಾಲ ಸ್ಥಗಿತಗೊಂಡಿದ್ದ ಬೆಂಗಳೂರು – ಶ್ರೀನಗರ ನಡುವಿನ ನೇರ ವಿಮಾನ ಹಾರಾಟ ಪುನಃ ಆರಂಭವಾಗಿದ್ದು, ಸೋಮವಾರ ಬೆಂಗಳೂರಿನಿಂದ ಹೊರಟ ವಿಮಾನ ಸಂಜೆ ಶ್ರೀನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಸೋಮವಾರ ಮಧ್ಯಾಹ್ನ 3.35ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೊ ವಿಮಾನ, ಸಂಜೆ 7 ಗಂಟೆಗೆ ಶ್ರೀನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

NEWS DESK

TIMES OF BENGALURU