ಸಿಡಿ ಯುವತಿ ಭದ್ರತೆಗೆ ಬಿಗಿ ಪೊಲೀಸ್ ಬಂದೂಬಸ್ತ್

ಬೆಂಗಳೂರು: ಸಿಡಿ ಲೇಡಿ ಬುಧವಾರ ವಿಚಾರಣೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಆಡುಗೋಡಿ ತಾಂತ್ರಿಕ ವಿಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯುವತಿ ಭದ್ರತೆಗಾಗಿ 8 ಮಹಿಳಾ ಪೊಲೀಸರ ತಂಡ ರಚಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಆಗುವವರೆಗೆ ನಮ್ಮ ರಕ್ಷಣೆಯಲ್ಲಿರಬೇಕು. ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಒದಗಿಸುತ್ತೇವೆ. ನೀವು ಬಯಸಿದರೆ ಮಹಿಳಾ ಸಾಂತ್ವನ ಕೇಂದ್ರದಲ್ಲೂ ಇರಬಹುದು. ಇಲ್ಲವಾದರೆ ನೀವು ಬಯಸಿದ ಸ್ಥಳದಲ್ಲೂ ಇರಬಹುದು ಎಂದು ಎಸ್‍ಐಟಿ ತನಿಖಾಧಿಕಾರಿಗಳು ಮಂಗಳವಾರ ಯುವತಿಯ ವಿಚಾರಣೆ ನಡೆಸಿದ ಬಳಿಕ ಹೇಳಿದ್ದರು.

ಯುವತಿ ಪರಿಚಿತ ಮಹಿಳಾ ಲಾಯರ್ ಮನೆಯಲ್ಕಿ ವಾಸವಾಗಲು ಇಚ್ಚಿಸಿದ್ದಳು. ಎಸ್‍ಐಟಿ ವಿಚಾರಣೆ ಮುಗಿದ ಬಳಿಕ ರಾತ್ರಿ 8 ಗಂಟೆಗೆ ಆಡುಗೋಡಿ ಟೆಕ್ನಿಕಲ್ ಸೆಂಟರ್‍ನಿಂದ ಯುವತಿ ನೀಡಿದ ವಿಳಾಸಕ್ಕೆ ಬಿಗಿ ಪೊಲೀಸ್ ‌  ಬಂದೋಬಸ್ತ್‌ನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಯುವತಿ ವಾಸವಿರುವ ನಿವಾಸಕ್ಕೂ ಹೆಚ್ಚಿನ ಭದ್ರತೆ ನೀಡಲಾಗಿದೆ.

NEWS DESK

TIMES OF BENGALURU