ಬೆಂಗಳೂರು: ಕ್ಯಾಬ್ ಉದ್ಯಮದ ದರ ಸಮರ, ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಾಪ್ ಜೀವ ಬಲಿಯಾಗಿದೆ. ಟ್ಯಾಕ್ಸಿ, ಕ್ಯಾಬ್ಗಳಿಗೆ ಸರ್ಕಾರ 1 ಕಿ.ಮೀಗೆ 24 ದರ ನಿಗದಿ ಮಾಡಿದೆ. ಕೆಎಸ್ಟಿಡಿಸಿ ಚಾಲಕರು ಇದನ್ನು ಪಾಲಿಸುತ್ತಿದ್ದರೆ, ಖಾಸಗಿ ಕಂಪನಿಗಳು ನಿಯಮ ಗಾಳಿಗೆ ತೂರಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಎಸ್ಟಿಡಿಸಿ ಚಾಲಕರು ಸೊರಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಡಿಗೆ ದೊರೆಯದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕೆಎಸ್ಟಿಡಿಸಿ ಕ್ಯಾಬ್ ಚಾಲಕ ಪ್ರತಾಪ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಾಪ್ ಅವರ ಸಾವಿನೊಂದಿಗೆ ಕೆಎಸ್ಟಿಡಿಸಿ ಚಾಲಕರ ಸಮಸ್ಯೆಗಳು ತೆರೆದುಕೊಂಡಿವೆ ಎಂದು ತಿಳಿಸಿದರು.
NEWS DESK
TIMES OF BENGALURU