ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ರಾಬರ್ಟ್ ಚಿತ್ರ ಎಲ್ಲೆಡೆ ಅಮೋಘ ಪ್ರದರ್ಶನ ಕಾಣುತ್ತಿದೆ. ಕನ್ನಡ ಸಿನಿ ಪ್ರೇಮಿಗಳ ಮನಸೂರೆಗೊಂಡಿರುವ ಈ ಚಿತ್ರದ ಕುರಿತು ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಈ ಚಿತ್ರದ ಗಳಿಕೆ ನೂರು ಕೋಟಿ ತಲುಪಿದೆ ಎನ್ನಲಾಗುತ್ತಿದೆ.
ಬ್ಲಾಕ್ ಬಸ್ಟರ್ ಚೌಕ್ ಚಿತ್ರದ ಖ್ಯಾತಿಯ ತರುಣ್ ಸುಧೀರ್ ಅವರ ಕೈಚಳಕದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ‘ರಾಬರ್ಟ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಗೆಲುವಿನ ಸುಳಿವು ನೀಡಿತು. ಫಸ್ಟ್ ಡೇ ಕೋಟ್ಯಂತರ (ಕರ್ನಾಟಕದಲ್ಲಿ 17 ಕೋಟಿ) ರೂಪಾಯಿ ಬಾಚಿಕೊಂಡು ಗಲ್ಲಾ ಪೆಟ್ಟಿಗೆಯಲ್ಲಿ ವಿಜಯದ ನಗೆ ಬೀರಿತು. ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಲ್ಲಿ ರಾಬರ್ಟ್ ಸಿನಿಮಾ ಹಣ ಗಳಿಕೆ ಇದೀಗ ನೂರು ಕೋಟಿ ಕ್ಲಬ್ ಸೇರಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ.
NEWS DESK
TIMES OF BENGALURU