ಸಿಡಿ ಸಂತ್ರಸ್ತೆಯ ಧ್ವನಿ ಪರೀಕ್ಷೆ ನಡೆಸಲಿರುವ ಎಸ್‍ಐಟಿ

ಬೆಂಗಳೂರು : ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಪೆÇ್ರಸೀಡಿಂಗ್ಸ್ ಆಗಿದೆ. ಇದೀಗ ಎಸ್‍ಐಟಿ ಅಧಿಕಾರಿಗಳು ಸಿಡಿ ಸಂತ್ರಸ್ತೆಯ ಧ್ವನಿ ಪರೀಕ್ಷೆಯನ್ನು ಇದೀಗ ಎಸ್‍ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಸ್ಥಳ ಮಹಜರಿಗೆ ಯಾವಾಗ ಕರೆದೊಯ್ಯಲಿದ್ದಾರೆ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ ಎಂಬುದಾಗಿ ಸಿಡಿ ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಹೇಳಿದರು. ಈ ಕುರಿತಂತೆ ಆಡುಗೋಡಿಯ ಟೆಕ್ನಿಕಲ್ ಸೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಮಾದ್ಯಮ ಮಿತ್ರರಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ.

ಸಿಡಿ ಲೇಡಿ, ಸಿಡಿ ಲೇಡಿ ವಕೀಲರು ಅಂತ ಬಳಸಬೇಡಿ. ಸಿಡಿ ಸಂತ್ರಸ್ತೆ ಎಂಬುದಾಗಿ ಬಳಸುವಂತೆ ವಕೀಲರಾದಂತ ಜಗದೀಶ್ ಮನವಿ ಮಾಡಿಕೊಂಡರು. ನಮಗೆ ಎಸ್‍ಐಟಿ ತಿಳಿಸಿದಾಗಲೇ ಗೊತ್ತಾಗೋದು, ಯಾವ ಬಗ್ಗೆ ತನಿಖೆ ನಡೆಸ್ತಾ ಇದ್ದಾರೆ. ಯಾವ ಬಗ್ಗೆ ತನಿಖೆ ನಡೆಸ್ತಾ ಇಲ್ಲ ಎಂಬುದು. ಇಂದು ಮೆಡಿಕಲ್ ಟೆಸ್ಟ್ ಬಳಿಕ, ವಾಯ್ಸ್ ಟೆಸ್ಟ್ ಸಂಬಂಧ ವಿಚಾರಣೆ ನಡೆಸಲು ಎಸ್‍ಐಟಿ ಅಧಿಕಾರಿಗಳು ಕರೆದುಕೊಂಡು ಬಂದಿರುವುದಾಗಿ ತಿಳಿಸಿದರು.

NEWS DESK

TIMES OF BENGALURU