ಆಸ್ತಿ ತೆರಿಗೆಯಲ್ಲಿ ಶೇ. 26ಕ್ಕೆ ಹೆಚ್ಚಳ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳಿಗೆ 2021-22ನೇ ಸಾಲಿನಲ್ಲಿ ಆಸ್ತಿ ತೆರಿಗೆ ತುಸು ದುಬಾರಿ ಆಗಲಿದೆ. ಈ ಆರ್ಥಿಕ ವರ್ಷದಿಂದ ಆಸ್ತಿ ತೆರಿಗೆ ಮೇಲೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರವನ್ನು ಸೇರಿಸಿ ಪಾವತಿಸಬೇಕಾಗುತ್ತದೆ.

ಇದುವರೆಗೆ ಆಸ್ತಿ ತೆರಿಗೆ ಮೇಲೆ ಶೇ 24ರಷ್ಟು ಉಪಕರವನ್ನು ಸಂಗ್ರಹಿಸಲಾಗುತ್ತಿದೆ. ಈ ಆರ್ಥಿಕ ವರ್ಷದಿಂದ ಉಪಕರದ ಪ್ರಮಾಣ ಶೇ 26ಕ್ಕೆ ಹೆಚ್ಚಳವಾಗಲಿದೆ. 2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್ 143ರ ಅಡಿ ಆಸ್ತಿ ತೆರಿಗೆ ಮೇಲೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರ ಸಂಗ್ರಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. 2021-22ನೇ ಸಾಲಿನಲ್ಲಿ ಆಸ್ತಿ ತೆರಿಗೆ ಜೊತೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರವನ್ನು ಸೇರಿಸಿ ಸಂಗ್ರಹಿಸುವ ಬಗ್ಗೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಸೋಮವಾರ (ಮಾ 29ರಂದು) ಸುತ್ತೋಲೆ ಹೊರಡಿಸಿದ್ದಾರೆ.

NEWS DESK

TIMES OF BENGALURU