ಯುವರತ್ನಗೆ ಅಭಿಮಾನಿಗಳಿಂದ ಗ್ರಾಂಡ್ ವೆಲ್ಕಮ್

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಇಂದು ಬಿಡುಗಡೆಯಾಗಿದೆ. ಬೆಳಗಿನ ಜಾವವೇ ಥಿಯೇಟರ್‌ಗೆ ಅಭಿಮಾನಿಗಳು ಲಗ್ಗೆ ಇಟ್ಟಿದ್ದು, ವಿಶೇಷ ಶೋ ವೀಕ್ಷಿಸಿದ್ದಾರೆ. ರಾತ್ರಿಯಿಂದಲೇ ಚಿತ್ರಮಂದಿರಗಳ ಬಳಿ ನೆರೆದಿದ್ದ ಅಭಿಮಾನಿಗಳು, ಪ್ರೇಕ್ಷಕರು ಸಿನಿಮಾ ನೋಡಲು ಕಾತರಿಸಿದ್ದಾರೆ. ಬೆಂಗಳೂರಿನ ವೀರೇಶ್, ಊರ್ವಶಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಗಳಿಗಾಗಿ ವಿಶೇಷ ಪ್ರದರ್ಶನ ನಡೆದಿದೆ.

ಈ ಮೊದಲೇ ಟಿಕೆಟ್ ಬುಕ್ ಮಾಡಿಕೊಂಡವರು ಮೊದಲ ದಿನ ಮೊದಲ ಶೋ ನೋಡಲು ಕಾಯುತ್ತಿದ್ದವರ ಸಂಭ್ರಮವಂತೂ ಹೇಳತೀರದಾಗಿದೆ. ಅಭಿಮಾನಿಗಳು ಚಿತ್ರಮಂದಿರ ಬಳಿ ಕಟೌಟ್ ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸುಮಾರು 2 ವರ್ಷಗಳ ನಂತರ ಅಪ್ಪು ಸಿನಿಮಾ ಬಿಡುಗಡೆಯಾಗಿದ್ದು, ಯುವರತ್ನ ಗೆ ಗ್ರಾಂಡ್ ವೆಲ್ಕಮ್ ನೀಡಲಾಗಿದೆ.

NEWS DESK

TIMES OF BENGALURU