ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ಬುಧವಾರ ಎಸ್ಐಟಿಯಿಂದ ವಿಚಾರಣೆ ಎದುರಿಸಿದ ಸಂದರ್ಭದಲ್ಲಿ ಸಂತ್ರಸ್ತೆಯು ರಮೇಶ್ ಜಾರಕಿಹೊಳಿ ಜತೆಗಿನ 280 ವಾಟ್ಸ್ಆಯಪ್ ಚಾಟ್ಗಳನ್ನು ನೀಡುವ ಮೂಲಕ ಸ್ಫೋಟಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬುಧವಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಮುಕ್ತಾಯವಾದ ಬಳಿಕ ಆಕೆಯನ್ನು ತನಿಖಾಧಿಕಾರಿಗಳು ಆಡುಗೋಡಿಯ ಟೆಕ್ನಿಕಲ್ ಸೆಲ್ಗೆ ಕರೆದೊಯ್ದರು. ಅಲ್ಲಿ ಎರಡೂವರೆ ತಾಸು ವಿಚಾರಣೆ ನಡೆಸಿ, ರಾತ್ರಿ 8ಕ್ಕೆ ಕಳುಹಿಸಲಾಗಿದೆ. ಗುರುವಾರ ಮತ್ತೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಕೆ ಈ ಹಿಂದೆ ಬಳಸುತ್ತಿದ್ದ ಮೊಬೈಲ್ ಕೊಡುವಂತೆ ಎಸ್ಐಟಿ ಕೇಳಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
NEWS DESK
TIMES OF BENGALURU