ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ನೈಸ್ ರಸ್ತೆ ಸಮೀಪದ ಶ್ರೀನಿವಾಸ ಕಾಲೋನಿ ನಿವಾಸಿ ಮಣಿಕಂಠ (35) ವರ್ಷ ಬಂಧಿತ ಆರೋಪಿ. ಬಂಧಿತನಿಂದ 6.35 ಲಕ್ಷ ರೂ. ಮೌಲ್ಯದ 131.5 ಗ್ರಾಂ ಚಿನ್ನಾಭರಣ ಹಾಗು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಖಚಿತ ಮಾಹಿತಿ ಪಡೆದು, ರಾತ್ರಿ ವೇಳೆ ಮನೆಗೆ ನುಗ್ಗುತ್ತಿದ್ದನು. ಕಬ್ಬಿಣದ ರಾಡ್ ಬಳಸಿ ಮನೆಯ ಬೀಗ ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದು ತನಿಖೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

NEWS DESK

TIMES OF BENGALURU