ಮ್ಯಾನ್ಮಾರ್ ಸೇನಾ ಪಡೆಗೆ ಶಸ್ತ್ರಾಸ್ತ್ರ ವರ್ಗಾವಣೆ ಮಾಡಿಲ್ಲ

ಬೆಂಗಳೂರು : ಮ್ಯಾನ್ಮಾರ್ ಸೇನಾ ಪಡೆ ಜೊತೆಗೆ ಯಾವುದೇ ರೀತಿ ವ್ಯಾವಹಾರಿಕ ಒಪ್ಪಂದ ಮತ್ತು ಸಂಪರ್ಕವನ್ನು ಹೊಂದಿಲ್ಲ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಡೆಟ್ ಸ್ಪಷ್ಟವಾಗಿ ಹೇಳಿದೆ.

ಮ್ಯಾನ್ಮಾರ್ ಮತ್ತು ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಮತ್ತು ಸಂಶೋಧನಾ ಸಂಸ್ಥೆಯ ಶಸ್ತ್ರಾಸ್ತ್ರ ವರ್ಗಾವಣೆ ದತ್ತಾಂಶದ ವರದಿ ಬಿಡುಗಡೆಗೊಳಿಸಿತ್ತು. 2017 ರಿಂದ 19ರವರೆಗೆ ಮ್ಯಾನ್ಮಾರ್ ಸೇನಾಪಡೆಗೆ ಎಚ್‍ಎಎಲ್ ಉಪಕರಣಗಳನ್ನು ಪೂರೈಸಿದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಎಚ್‍ಎಎಲ್ ಸ್ಪಷ್ಟನೆ ನೀಡಿದೆ.

NEWS DESK

TIMES OF BENGALURU