ಜಾರಕಿಹೊಳಿ ಬಂಧನಕ್ಕೆ ವಕೀಲ ಜಗದೀಶ್ ಒತ್ತಾಯ

ಬೆಂಗಳೂರು: ರಮೇಶ್ ಜಾರಕಿಹೊಳಿಯವರನ್ನು ಬಂಧಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಕೆ.ಎನ್.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಪ್ರಕ್ರಿಯೆ ಬಳಿಕವೂ ಆರೋಪಿಯನ್ನು ಬಂಧಿಸಲಿಲ್ಲ. ಜನ ಕೂಡ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ.

ಸಿಎಂ ಯಡಿಯೂರಪ್ಪ ಆರೋಪಿಯನ್ನು ಬಂಧಿಸುವಂತೆ ಸೂಚಿಸಬೇಕು. ಇಲ್ಲ ನಾಳೆ ನಾವೂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಕೀಲ ಜಗದೀಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಯುವತಿಯ ವೈಯಕ್ತಿಕ ಪರಿಕ್ಷೆ ಮುಗಿದಿದೆ ಆದರೂ ಆರೋಪಿಯನ್ನು ಬಂಧಿಸುವ ಕೆಲಸ ಆಗಿಲ್ಲ. ಮೊದಲು ಆರೋಪಿಯನ್ನು ಬಂಧಿಸಿ ನಂತರ ಮೆಡಿಕಲ್ ಚಕ್ ಆಪ್ ಆಗಬೇಕಿತ್ತು ಎಂದು ವಕೀಲ ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರು.

 

NEWS DESK

TIMES OF BENGALURU