ಪೊಲೀಸರ ಆಹಾರ ಭತ್ಯದಲ್ಲಿ ಹೆಚ್ಚಳ

ಬೆಂಗಳೂರು: ಚುನಾವಣೆ, ಹಬ್ಬಹರಿದಿನ, ಪ್ರತಿಭಟನೆ ಸೇರಿದಂತೆ ವಿಶೇಷ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ನೀಡಲಾಗುತ್ತಿದ್ದ ಆಹಾರ ಭತ್ಯೆಯನ್ನು 100 ರೂ.ಯಿಂದ 200 ರೂ.ಗೆ ಏರಿಕೆ ಮಾಡಿ ಸರ್ಕಾರ ಆದೇಶಿಸಿದೆ.

ಪ್ರತಿದಿನ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿದ್ದು, ಆಹಾರ ತಯಾರಕರು ಸಹ ಊಟ/ತಿಂಡಿ ಬೆಲೆ ಹೆಚ್ಚಿಸುತ್ತಿದ್ದಾರೆ. ಇದರಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ದಿನಕ್ಕೆ 100 ರೂ. ಆಹಾರ ಭತ್ಯೆ ನೀಡಲಾಗುತ್ತಿದೆ. ಇದೀಗ 200 ರೂ ಗೆ ಏರಿಕೆಯಾಗಿದೆ.

NEWS DESK

TIMES OF BENGALURU