ಚಿನ್ನಾಭರಣ ಕದಿಯುತ್ತಿದ್ದ ಕಳ್ಳ ಪೊಲೀಸರ ವಶಕ್ಕೆ

ಬೆಂಗಳೂರು: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಳ್ಳತನ ಎಸಗಿದ್ದ ಆರೋಪಿ ಬಸವರಾಜು ಪ್ರಕಾಶ್ (33) ಎಂಬಾತನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಮಲ್ಲಂಪೇಟೆಯ ಬಸವರಾಜು, ಇದುವರೆಗೂ 32 ಕಡೆ ಕಳ್ಳತನ ಎಸಗಿದ್ದ. ಆತನಿಂದ  16.41 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಕೆಂಗೇರಿ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು, 2020ರ ಏಪ್ರಿಲ್ 8ರಂದು ರಾತ್ರಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆದು ಕಿಟಕಿ ಬಳಿಯ ಕುರ್ಚಿ ಮೇಲಿಟ್ಟು ಮಲಗಿದ್ದರು. ಮರುದಿನ ಎದ್ದು ನೋಡಿದಾಗ ಚಿನ್ನದ ಸರವೇ ಇರಲಿಲ್ಲ. ಸರ ಕಳುವಾದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗಲೇ ಆರೋಪಿ ಸಿಕ್ಕಿಬಿದ್ದ. ಆತನೇ ರಾತ್ರಿ ಕಿಟಕಿ ಬಳಿ ಬಂದು ಸರ ಕದ್ದಿರುವುದಾಗಿ ತಪ್ಪೊಪ್ಪಿಕೊಂಡ ಎಂದು ತಿಳಿಸಿದರು.

NEWS DESK

TIMES OF BENGAURU