ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪಟ್ಟಿಗೆ ಬ್ರೇಕ್

ಬೆಂಗಳೂರು : ಎರಡು ವಿಧಾನಸಭಾ ಹಾಗೂ ಒಂದು ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪಟ್ಟಿ ಕೂಡ ಬಿಡುಗಡೆ ಮಾಡುವಂತ ಯೋಚನೆಯಲ್ಲಿದ್ದರು. ಇದಕ್ಕಾಗಿ ಪಟ್ಟಿ ಕೂಡ ಸಿದ್ಧಪಡಿಸಿಟ್ಟುಕೊಂಡಿದ್ದರು. ಆದ್ರೇ ಬೈಎಲೆಕ್ಷನ್ ಸಂದರ್ಭದಲ್ಲೇ ತವರು ಜಿಲ್ಲೆ ಮೇಲೆ ಕಣ್ಣಿಟ್ಟಿದ್ದವರು ಅಸಮಾಧಾನ ಹೊರ ಹಾಕುವ ಸೂಚನೆ ಹಿನ್ನಲೆಯಲ್ಲಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪಟ್ಟಿಗೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.

NEWS DESK

TIMES OF BENGALURU