ಬಜ್ಜಿ-ಬೋಂಡ ಮಾರಾಟ ಮಾಡಿ ಪ್ರತಿಭಟನೆ

ಬೆಂಗಳೂರು : ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಇನ್ನೂ ಈಡೇರಿಸದ ಹಿನ್ನೆಲೆಯಲ್ಲಿ ನಿನ್ನೆಯಿಂದ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಚಳುವಳಿ ನಡೆಸುತ್ತಿದ್ದಾರೆ. ತಮ್ಮ 9 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ವಿಭಿನ್ನ ಧರಣಿ ನಡೆಸುತ್ತಿದ್ದಾರೆ. ಏ. 7ರಂದು ಎಲ್ಲ ಸಾರಿಗೆ, ಬಸ್‍ಗಳು ಸ್ತಬ್ಧವಾಗಲಿದೆ.

2ನೇ ದಿನದ ಮುಷ್ಕರದ ದಿನವಾದ ಇಂದು ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ನಿಗಮದ ಡಿಪೋಗಳಲ್ಲಿ ನೌಕರರು ತಮ್ಮ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ,ಬೋಂಡಾ ಮಾರಾಟ ಮಾಡಲಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಇಂದು ಬೆಂಗಳೂರಿನ ಸರ್ಕಲ್ ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ- ಬೋಂಡ ಮಾರಾಟ ಮಾಡಲಿದ್ದಾರೆ ಎನ್ನಲಾಗುತ್ತಿದೆ.

 

NEWS DESK

TIMES OF BENGALURU