ಯುವರತ್ನ ಸಿನಿಮಾಗೂ ತಪ್ಪದ ಪೈರಸಿ ಕಾಟ

ಬೆಂಗಳೂರು: ಪೈರಸಿ ಭೂತ ಚಿತ್ರರಂಗವನ್ನು ಬಿಡದೆ ಕಾಡುತ್ತಿದೆ. ದರ್ಶ್‍ನ್ ಅಭಿನಯದ ರಾಬರ್ಟ್ ಚಿತ್ರದ ನಂತರ ಇದೀಗ ನಟ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೂ ಪೈರಸಿ ಸೋಂಕು ತಾಕಿದೆ. ಚಿತ್ರವು ಏಪ್ರಿಲ್ 1ರಂದು ತೆರೆಕಂಡಿದ್ದು, ಮೊದಲ ದಿನವೇ ಪೈರಸಿ ಆಗಿದೆ. ಟೆಲಿಗ್ರಾಂ ಸೇರಿದಂತೆ ಎಲ್ಲೆಡೆ ಯುವರತ್ನ ಚಿತ್ರ ಹರಿದಾಡುತ್ತಿದೆ.

ಪೈರಸಿ ವಿರುದ್ಧ ಎಲ್ಲರು ಒಗ್ಗಟ್ಟಾಗೋಣ ಎಂದು ಟ್ವಿಟರ್ ಮೂಲಕ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಮನವಿ ಮಾಡಿದ್ದಾರೆ. ಪುನೀತ್ ಅಭಿಮಾನಿಗಳು ಸಹ ಪೈರಸಿ ವಿರುದ್ಧ ಧ್ವನಿಯೆತ್ತಿದ್ದಾರೆ. ಮಾ. 11ರ ಶಿವರಾತ್ರಿ ಹಬ್ಬದಂದು ಬಿಡುಗಡೆಯಾದ ರಾಬರ್ಟ್ ಚಿತ್ರ ಸಹ ಪೈರಸಿ ಆಯಿತು. ಚಿತ್ರದ ನಿರ್ಮಾಪಕರೇ ಹೇಳಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಲಿಂಕ್‍ಗಳನ್ನು ಆನ್‍ಲೈನ್‍ನಿಂದ ತೆಗೆದಿದ್ದೇವೆಂದು ಹೇಳಿಕೊಂಡಿದ್ದರು. ಆದರೂ ರಾಬರ್ಟ್ ಚಿತ್ರ ಹಣಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ.

 

NEWS DESK

TIMES OF BENGALURU