ಪೆಂಕಾಕ್ ಸಿಲಟ್ : 19 ಪದಕ ಗಳಿಸಿದ ಕರ್ನಾಟಕ

ಬೆಂಗಳೂರು: ಕರ್ನಾಟಕ ತಂಡವು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ರಾಷ್ಟ್ರಮಟ್ಟದ ಪೆಂಕಾಕ್ ಸಿಲಟ್ ಟೂರ್ನಿಯಲ್ಲಿ ಎರಡು ಚಿನ್ನ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದೆ.

ಒಂಬತ್ತು ಬೆಳ್ಳಿ ಹಾಗೂ ಎಂಟು ಕಂಚಿನ ಪದಕಗಳು ಕರ್ನಾಟಕ ತಂಡಕ್ಕೆ ಒಲಿದಿವೆ. ಟಂಡಿಂಗ್ ವಿಭಾಗದಲ್ಲಿ ಅನುಷಾ ಎಂ. ಹಾಗೂ ವೈ. ಸಮೀಕ್ಷಾ ರೆಡ್ಡಿ ಚಿನ್ನಕ್ಕೆ ಕೊರಳೊಡ್ಡಿದರು. ಪದಕ ಗೆದ್ದವರು: ಪ್ರೀ ಟೀನ್: ತುಂಗಲ್ ವಿಭಾಗ: ವಿವೇಕ್ ಎಸ್.ಎಚ್. ಆರಾಧ್ಯ (ಕಂಚು); ಗಂಡಾ ವಿಭಾಗ: ಸಾನ್ವಿಕ್ (ಕಂಚು), ಶ್ರೇಯಸ್ ಗೌಡ ಪಿ.(ಕಂಚು), ಟಂಡಿಂಗ್ ವಿಭಾಗ: ಅನುಷಾ ಎಂ. (ಚಿನ್ನ).

NEWS DESK

TIMES OF BENGALURU