ರಾಜ್ಯದಲ್ಲಿ ಟ್ಯಾಕ್ಸಿ ದರ ಹೆಚ್ಚಿಸಿದ ಸರ್ಕಾರ

ಬೆಂಗಳೂರು: ಮೊದಲೇ ಕೊರೋನಾ ಮತ್ತು ಲಾಕ್ ಡೌನ್‍ನಿಂದ ರಾಜ್ಯದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಮಾಡಲು ಸರಿಯಾಗಿ ಕೆಲಸವಿಲ್ಲ, ಕೈಯಲ್ಲಿ ಕಾಸಿಲ್ಲ ಪೆಟ್ರೋಲ್ ಡಿಸೇಲ್ ಬೆಲೆ ಸೆಂಚುರಿ ಬಾರಿಸಲು ಮುಂದಾಗಿದೆ. ಇದರ ಮಧ್ಯದಲ್ಲಿ ಚಾಲಕ ಸಮುದಾಯಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಟ್ಯಾಕ್ಸಿ ದರವನ್ನು ಹೆಚ್ಚಳ ಮಾಡಿದೆ. ಇದು ಚಾಲಕ ಸಮುದಾಯಕ್ಕೆ ಸಂತಸ ತರಿಸಿದ್ರೆ, ಸರ್ಕಾರದ ಈ ನಿರ್ಧಾರ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ.

NEWS DESK

TIMES OF BENGALURU