ಯಲಹಂಕಕ್ಕೆ ಕುದುರೆಗಳ ಸ್ಥಳಾಂತರ

ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಲಾಯಗಳಲ್ಲಿರುವ 800ಕ್ಕೂ ಹೆಚ್ಚು ಕುದುರೆಗಳ ಪೈಕಿ 200 ಕುದುರೆಗಳನ್ನು ಯಲಹಂಕದಲ್ಲಿರುವ ಸ್ಥಳವೊಂದಕ್ಕೆ ಸ್ಥಳಾಂತರಕ್ಕೆ ಪ್ರಯತ್ನ ನಡೆದಿದೆ ಎಂದು ಬಿಟಿಸಿ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ಬಿಟಿಸಿಯಲ್ಲಿ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಣಿ ದಯಾ ಸಂಘಟನೆ (ಕ್ಯೂಪ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಗುರುವಾರ ನಡೆಯಿತು. ಆಗ ಪ್ರತಿಕ್ರಿಯೆ ಸಲ್ಲಿಸಿದ ಬಿಟಿಸಿ ಪರ ವಕೀಲರು, ಕುದುರೆ ಲಾಯಗಳ ದುರಸ್ತಿ ಕಾಮಗಾರಿ ನಡೆಯುತ್ತಿದೆ. 800 ಕುದುರೆಗಳ ಪೈಕಿ 200 ಕುದುರೆಗಳನ್ನು ಸ್ಥಳಾಂತರಿಸಲು ಯಲಹಂಕ ಬಳಿ ಪ್ರಶಸ್ತವಾದ ಸ್ಥಳವೊಂದನ್ನು ಗುರುತಿಸಲಾಗಿದೆ. ಜಮೀನು ಮಾಲೀಕರ ಜತೆ ಮಾತುಕತೆಯೂ ನಡೆಯುತ್ತಿದೆ ಎಂದು ತಿಳಿಸಿದರು.

NEWS DESK

TIMES OF BENGALURU