ಕೋವಿಡ್ ನಿಯಮದ ನಡುವೆ ಗುಡ್ ಫ್ರೈಡೇ ಆಚರಿಸಲಾಗಿದೆ

ಬೆಂಗಳೂರು:ಯೇಸುಕ್ರಿಸ್ತ ಶಿಲುಬೇರಿದ ಗುಡ್ ಫ್ರೈಡೇ ದಿನವನ್ನು ನಗರದ ಚರ್ಚ್‍ಗಳಲ್ಲಿ ಶುಕ್ರವಾರ ಆಚರಿಸಲಾಯಿತು. ಕೋವಿಡ್ ಇರುವುದರಿಂದ ಚರ್ಚ್‍ಗಳಲ್ಲಿ ಎಲ್ಲ ರೀತಿಯ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯವಾಗಿತ್ತು.

ಚರ್ಚ್‍ಗಳಲ್ಲಿ ಪ್ರಾರ್ಥನೆಗೆ ಹಾಜರಾಗುವವರಿಗೆ ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿತ್ತು. ಕೋವಿಡ್‍ನ ಹಿಂದಿನ ನಿಯಮದಂತೆ ಮಕ್ಕಳು ಹಾಗೂ ವೃದ್ಧರಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಲು ಅವಕಾಶ ಇರಲಿಲ್ಲ. ಇವರಿಗಾಗಿ ಕೆಲವು ಚರ್ಚ್‍ಗಳಲ್ಲಿ ಆನ್‍ಲೈನ್ ವ್ಯವಸ್ಥೆಯೂ ಇತ್ತು.

NEWS DESK

TIMES OF BENGALURU