ಬೆಂಗಳೂರು: ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿರುವ ಬಗ್ಗೆ ವರದಿಯಾಗಿದೆ. ಕಬ್ಜ ಶೂಟಿಂಗ್ ವೇಳೆ ಉಪೇಂದ್ರರವರಿಗೆ ಕಬ್ಬಿಣದ ರಾಡ್ ನಿಂದ ಹೊಡೆಯುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು, ಈ ವೇಳೆ ಫೈಟರ್ ಹಿಂದಿನಿಂದ ಬೀಸಿದ ಚೂಪಾದ ರಾಡ್ ನಿಂದ ತಪ್ಪಿಸಿಕೊಳ್ಳುವಾಗ ಮಿಸ್ ಆಗಿ ಅದು ಉಪೇಂದ್ರ ಅವರ ತಲೆಗೆ ತಾಗಿದೆ. ಅದೃಷ್ಟವಶಾತ್ ಗಂಭೀರ ಗಾಯವಾಗಿಲ್ಲ.
ಕೆಲಕಾಲ ಸುಧಾರಿಸಿಕೊಂಡ ನಂತರ ಉಪೇಂದ್ರ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗುವರು ಎಂದು ವರದಿಯಾಗಿದೆ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ.
NEWS DESK
TIMES OF BENGALURU