ಸರ್ಕಾರದ ವಿರುದ್ಧ ಸಿಡಿದೆದ್ದ ಸ್ಯಾಂಡಲ್‍ವುಡ್

ಬೆಂಗಳೂರು : ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ನಿನ್ನೆ ಹೊಸ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿತ್ತು. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವಂತ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಕೂಡ ಜಾರಿಗೊಳಿಸಲಾಗಿತ್ತು. ಅಲ್ಲದೇ ಶೇ.50ರಷ್ಟು ಚಿತ್ರಮಂದಿರಗಳ ಸೀಟು ಭರ್ತಿಗೆ ನಿಬರ್ಂಧ ವಿಧಿಸಿತ್ತು. ರಾಜ್ಯ ಸರ್ಕಾರದ ನಿಬರ್ಂಧದ ವಿರುದ್ಧ ಸ್ಯಾಂಡಲ್ ವುಡ್ ಸಿಡಿದೆದ್ದಿದೆ. ನಿನ್ನೆ ರಾಜ್ಯ ಸರ್ಕಾರ ಕೊರೋನಾ ಸೋಂಕಿತ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿ, ನೂತನ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿತ್ತು.

ಇಂತಹ ಮಾರ್ಗಸೂಚಿ ಕ್ರಮಗಳಲ್ಲಿ ಬೆಂಗಳೂರು ನಗರ, ಮೈಸೂರು ಸೇರಿದಂತೆ ಕೆಲ ಸೋಂಕಿನ ಪ್ರಕರಣಗಳು ಹೆಚ್ಚಿರುವಂತ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಚಿತ್ರಮಂದಿರಗಳ ಸೀಟುಗಳ ಭರ್ತಿಗೆ ಶೇ.50ರಷ್ಟು ಮಾತ್ರವೇ ಅವಕಾಶ ನೀಡಲಾಗಿತ್ತು. ರಾಜ್ಯ ಸರ್ಕಾರದ ನಡೆಯ ಬಗ್ಗೆ ಚರ್ಚಿಸಲು ಇಂದು ನಿರ್ಮಾಪಕರ ಸಭೆಯನ್ನು ಫಿಲ್ಮ್ ಚೇಂಬರ್ ಕರೆದಿದೆ.

NEWS DESK

TIMES OF BENGALURU