ನಗರದ ರಸ್ತೆಗಳಲ್ಲಿ ಮತ್ತೆ ರಾರಾಜಿಸುತ್ತಿರುವ ಜಾಹೀರಾತು

ಬೆಂಗಳೂರು : ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಬ್ಯಾನ್ ಆಗಿದ್ದ ಜಾಹೀರಾತುಗಳು ಮತ್ತೆ ತಲೆ ಎತ್ತಲು ಪ್ರಾರಂಭವಾಗಿವೆ. ನ್ಯಾಯಾಲಯದ ಆದೇಶವಿದ್ದರೂ ಅಕ್ರಮವಾಗಿ ಜಾಹೀರಾತು ಮಾಫಿಯ ರೆಕ್ಕೆ ಬಿಚ್ಚುತ್ತಿವೆ. ಬಸ್ ಶೆಲ್ಟರ್‍ಗಳ ನಿರ್ಮಾಣದ ಹೆಸರಲ್ಲಿ ನಗರದ ಅಂದವನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ.

ನಗರದ ರಸ್ತೆಗಳಲ್ಲಿ ಜಾಹೀರಾತು ರಾರಾಜಿಸುತ್ತಿವೆ. ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಹೆಸರಲ್ಲಿ ಅನಧಿಕೃತವಾಗಿ ಜಾಹೀರಾತುಗಳು ತಲೆ ಎತ್ತಲಾರಂಭಿಸಿವೆ. ಬಿಬಿಎಂಪಿಯ ಕೆಲ ಭ್ರಷ್ಟ ಅಧಿಕಾರಿಗಳ ಲಂಚದ ಆಟಕ್ಕೆ ಹೈಕೋರ್ಟ್ ಆದೇಶವೂ ಉಲ್ಲಂಘನೆಯಾಗಿದೆ. ಜಾಹೀರಾತುಗಳನ್ನು ಅಳವಡಿಸಲೆಂದೇ ಸಾವಿರಾರು ಬಸ್ ಶೆಲ್ಟರ್‍ಗಳು ತಲೆ ಎತ್ತಿವೆ.

NEWS DESK

TIMES OF BENGALURU